Saturday, February 5, 2011

ಜೇಬಿನಲ್ಲೂ ಇದೆ ಡಾಕ್ಟರೇಟ್!
ಡಾಕ್ಟರೇಟ್ ಪಡೆಯಲು ಮೂರು ವರ್ಷಗಳ ಕಾಲ ಕೆಲವೊಮ್ಮೆ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಪಿ.ಎಚ್.ಡಿ,ಗೆ ಯೋಗ್ಯವಾದ ಪ್ರಬಂಧವನ್ನು ಮಂಡಿಸುವ ಅಗತ್ಯವಿರುತ್ತದೆ.80-90 ರ ದಶಕದಲ್ಲಿ ಈ ಪಿ,ಎಚ್.ಡಿ ಪಡೆಯುವುದೆಂದರೆ ಅದು ಒಂದು ಸಾಹಸವೇ ಸರಿ.
ಇತ್ತೀಚಿನ ದಿನಗಳಲ್ಲಿ ದಿನಪತ್ರಿಕೆಗಳಲ್ಲಿ ದಿನಕೊಬ್ಬರು ಡಾಕ್ಟರೇಟ್ ಪಡೆಯುವವರ  ಹೆಸರನ್ನು ನಾವು ನೋಡಬಹುದು.ಇಂದಿನ ಅರ್ಧದಷ್ಟು ಮಂದಿ ಪಿ.ಎಚ್.ಡಿ ಪಡೆಯುವ ಸಂದರ್ಭದಲ್ಲಿ ಅವರುಗಳ ಗೈಡುಗಳೇ ಪ್ರಬಂದವನ್ನು ಪೂರ್ತಿಯಾಗಿ ಬರೆದು, ಡಾಕ್ಟರೇಟ್ ಅನ್ನು ತನ್ನ  ಕಿಸೆಯಿಂದ ತೆಗೆದು -ತೆಗೆದು ಬಿಸಾಕುತ್ತಾರೆ.ಇಲ್ಲಿ ಗೈಡ್ ಗಳಿಗೆ  ತನು ಮನ ಧನದಿಂದ ಯಥೇಚ್ಚವಾಗಿ ಸಹಕರಿಸುವುದಾದರೆ ಈ ಅವಕಾಶ ಲಭ್ಯ.
ಜೀವಮಾನದಲ್ಲಿ 4,5 ಪುಟಗಳಷ್ಟು ಪ್ರಬಂಧ ಬರೆಯದೆ ಇದ್ದವರಿಗೂ ಪಿ.ಎಚ್. ಡಿ.ದೊರಕುತ್ತಿವೆ. ಇದು ರಿಸರ್ಚ್ ಮಾಡಿ, ಕಷ್ಟಪಟ್ಟು ಹುಡುಕಿ ಸಂಗ್ರಹಿಸಿ, ರಚಿಸಲ್ಪಟ್ಟ ಪ್ರಬಂಧಗಳನ್ನು ಮಂಡಿಸಿ ಡಾಕ್ಟರೇಟ್ ಪಡೆಯುತ್ತಾರೋ ಅವರಿಗೆ ಮಾಡುತ್ತಿರುವ ಅವಮಾನ. 
ಈ ಎಲ್ಲಾ ಅವಾಂತರಗಳನ್ನು ಕಂಡು New yorker times ತಂಡವು ರೋಸಿ ಹೋಗಿ, ತಾವೇ ತಮ್ಮ ಹೆಸರಿನ ಮುಂದೆ ಡಾಕ್ಟರೇಟ್ ಅನ್ನು ನಮೊದಿಸಿದ್ದಾರೆ. 'ನಾವು ಹೀಗೆ ಮಾಡಿದರೆ ತಪ್ಪೇನು?' ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತ ಡಾ.ಶೆಟ್ಟಿ, ಡಾ.ಶ್ರೇ ಯವರ ಅಂತರಾಳದ ನೋವನ್ನು ನನ್ನಲ್ಲಿ ವ್ಯಕ್ತಪಡಿಸಿದ್ದಾರೆ.
                                                   ಕೆ.ಪಿ.ಭಟ್

No comments:

Post a Comment