Thursday, February 3, 2011

ಕಾಲೇಜಿಗೆ ಹೋದರೆ knowledge ಬರುತ್ತಾ?
ಕಾಲೇಜಿನಲ್ಲಿ  ಲೈಬ್ರೆರಿ ಸೈಡಿಗೆ ತಲೆ ಹಾಕಿ ಮಲಗದೇ ಇದ್ದರೆ ನಾವು ಪಡೆಯುವ ಜ್ಞಾನ ಕೇವಲ 30 % ಅಂತ ಹೇಳಬಹುದು.
ಜ್ಞಾನ ಎಂಬುದು ಅದೆಷ್ಟೋ ನಾನಾ ರೀತಿಯ ಪುಸ್ತಕಗಳ ಜೊತೆ ಒಡನಾಟ ಬೆಳಸಿಕೊಂಡಾಗ, ಜೊತೆಗೆ ಹೆಚ್ಚಿನ ಸಂದರ್ಭದಲ್ಲಿ ಜೀವನದ ಅನುಭವವೇ ಜ್ಞಾನಕ್ಕೆ ಸಣ್ಣ ದಾರಿ ಮಾಡಿಕೊಡುತ್ತದೆ. ಇವುಗಳೆಲ್ಲ ಕ್ಲಾಸು ಎಂಬ ನಾಲ್ಕು ಗೋಡೆಯ ಮಧ್ಯೆ ಕುಳಿತು ದೊರಕುವಂತದ್ದಲ್ಲ.
ತರಗತಿಯಲ್ಲಿ 90 % ಮಾರ್ಕ್ಸ್ ಇದೆ ಅಂತಾದರೆ ಅದು ಜ್ಞಾನವಲ್ಲ, ಯಾರು ಬೇಕಾದರು ಮಾರ್ಕ್ಸ್ ಗಳಿಸಬಹುದು ಆದರೆ ಜ್ಞಾನವನ್ನಲ್ಲ. ಮಾರ್ಕ್ಸ್ ಎಂಬುವುದು ಸಮಾಜದ ಬಾಯಿ ಮುಚ್ಚಿಸಲು ಬೇಕೆ ವಿನಃ ಮಾರ್ಕ್ಸ್ ಪಡೆಯುವುದರಿಂದ ಜೀವನಕ್ಕೆ ಏನು ಲಾಭವಿಲ್ಲ.
ವಿದ್ಯಾರ್ಥಿಯೊಬ್ಬ ಉತ್ತಮ ಅಂಕದಿಂದ ಹೆಚ್ಚು ಅಂದರೆ rank ಗಳಿಸಬಹುದು. ತದನಂತರ ಉದ್ಯೋಗಕ್ಕೆ ಸೇರಿ ಹಣ ಮಾಡಬಹುದು ಅಷ್ಟೆ . 
ಒಮ್ಮೆ ಓದುವ ಹುಚ್ಚು ಶುರು ಮಾಡಿಕೊಳ್ಳಿ ಜ್ಞಾನದ ಜೊತೆಗೆ ಜೀವನ successful ಆಗುತ್ತದೆ.ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರಮುಖವಾಗಿ ಬೇಕಾದದ್ದು ಓದಿನ ಹುಚ್ಚು, ಅದು ಇದ್ದಾಗ ಮಾತ್ರ ಆತನಿಂದ ಉತ್ತಮ ಬರವಣಿಗೆ ಹೊಮ್ಮಲು ಸಾಧ್ಯ.
                                                 ಕೆ.ಪಿ.ಭಟ್ 

No comments:

Post a Comment