Friday, February 4, 2011

ನೋವುಗಳಿಂದ ಖಿನ್ನರಾಗದಿರಿ 
ತಾಯಿಯ ನೋವಿನ ಜತೆಗೆ ಮಗುವಿನ ಜನನ. ಇಲ್ಲೇ ನಮಗೆ ಪರಿಪೂರ್ಣವಾಗಿ ಬಾಳಿನ ಅರ್ಥ ಏನು ಎಂಬುವುದು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ತಾಯಿಯ ನೋವು, ಮಗುವಿನ ಜನನ. ಮಗುವಿನ ಅಳು, ಹೇಳಿಕೊಳ್ಳಲಾಗದ ಅಸಾಧ್ಯವಾದ ತಾಯಿಯ ಸಂತಸ.
ಈ ನೋವು ಮತ್ತು ಸಂತಸ ಎರಡೂ, ಬದುಕಿನ ಅವಿಭಾಜ್ಯ ಅಂಗ. ಹುಟ್ಟು ಮತ್ತು ಸಾವಿನ ನಡುವೆ; ಜಗತ್ತು ಎಂಬ ಸಾಗರದಲ್ಲಿ ಬಾಳು ಎಂಬ ಹಡಗು ಸರಿಯಾದ ದಾರಿಯಲ್ಲಿ ಸಾಗಲು, ಮುಳುಗದೆ ಇರಲು, ಸಂತಸ ಮತ್ತು ನೋವಿನ ಎರಡು ಗಾಳಿಯೂ ಬೇಕು. ಈ ಗಾಳಿ ತನಗೆ ಇಷ್ಟ ಬಂದಂತೆ ಬೀಸುತ್ತಲೇ ಇರುತ್ತದೆ. ಆದರೆ ನಾವು ಆ ಗಾಳಿಯ ದಿಕ್ಕನ್ನು ಹಿಡಿದು ಅದರ ವೇಗವನ್ನು ಮತ್ತು ವೋಗವನ್ನು ಮನವರಿಕೆ ಮಾಡಿಕೊಂಡು ಅದರ ಜೊತೆಗೆ ಸಾಗಬೇಕು.
ಸಂತಸದ ಗಾಳಿ ಬೀಸಿದಾಗ, ಆ ಗಾಳಿಯ ಜತೆ ಸಿಕ್ಕಾಪಟ್ಟೆ ಉಬ್ಬದೆ, ನೋವಿನ ಗಾಳಿ ಬೀಸಿದಾಗ ಕುಗ್ಗದೆ ಇರುವುದು ಒಂದು ಸಣ್ಣ ಕಲೆ. ಯಾಕೆಂದರೆ, ಜೀವನದಲ್ಲಿ ಗೆಲುವು ದೊರೆತಾಗ ಕೆಲವರು ತಮ್ಮ ಹಿಂದಿನ ದಿನಗಳನ್ನೇ ಮರೆತು ಆ ಕೇವಲ ಒಂದೇ ಗೆಲುವಿನಲ್ಲಿ ಮೈ ಮರೆತು ತಮಗರಿವಿಲ್ಲದಂತೆ ತಾವೇ ಸೋಲನ್ನು ಆಹ್ವಾನಿಸುತ್ತಾರೆ. ಇಂತಹವರಿಗೆ ಸೋಲು, ನೋವು, ಎದುರಾದಾಗ ಅದನ್ನು ಯಾವ ರೀತಿಯಾಗಿ ಎದುರಿಸಬೇಕೆಂಬುದೆ ತಿಳಿಯದೆ ಮಾನಸಿಕವಾಗಿ ಕುಸಿದುಬಿದುತ್ತಾರೆ. ಈ ಮಾನಸಿಕ ಕುಸಿತದಿಂದ ಖಿನ್ನತೆ ಎಂಬ ಭೂತ ಆ ವ್ಯಕ್ತಿಯಲ್ಲಿ ಹುಟ್ಟಿಕೊಳ್ಳುತ್ತದೆ. ನಂತರದ ದಿನಗಳಲ್ಲಿ ಅದು ಚಿಗುರೊಡೆದು ಹೆಮ್ಮರವಾಗಿ ಬೆಳೆದು ನಿಂತು, ವ್ಯಕ್ತಿಯ ಪ್ರತಿಯೊಂದು ಕೆಲಸಕ್ಕೆ ಇದು ತನ್ನ ಬೇರನ್ನು ಇಳಿ ಬಿಡುತ್ತದೆ. ಇದರಿಂದ, ಯಾವ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ದಿನೇ ದಿನೇ ಆತನಲ್ಲಿ ತಾಳ್ಮೆ ಕಡಿಮೆಯಾಗುತ್ತದೆ. ನಗು ಮಾಸಿಹೋಗುತ್ತದೆ. ಸಣ್ಣ ಸಣ್ಣ ವಿಚಾರಕ್ಕೆ ಸಿಟ್ಟು ನೆತ್ತಿಗೇರುತ್ತದೆ. ಅಳಲು ಪ್ರಾರಂಭಿಸುತ್ತಾನೆ. ಈ Control  ಎಂಬ ಸ್ಥಿತಿ ಆತನಿಂದ ವಿಮುಖವಾಗುತ್ತ ಹೋಗುತ್ತದೆ. ಇಂತಹ ಸಂಧರ್ಭದಲ್ಲಿ ವ್ಯಕ್ತಿ ಮತ್ತೆ ಸೋಲನ್ನು ಅನುಭವಿಸಿದರೆ, ಒಂದಾ ಅತ್ಮಹೀನತೆಯತ್ತ ಸಾಗುತ್ತಾನೆ. ಇಲ್ಲ ಮಾನಸಿಕ ವಿಹೀನನಾಗಿ ಹುಚ್ಚನಾಗಿ ಬಿಡುತ್ತಾನೆ. So ಇದನೆಲ್ಲವನ್ನು ಅರಿತು ಸೋಲು-ಗೆಲುವನ್ನು, ಸುಖ-ದುಃಖವನ್ನು ಸಮನಭಾವದಲ್ಲಿ ಸ್ವೀಕರಿಸಿದರೆ,  ಈ ಖಿನ್ನತೆ ಯಾವತ್ತೂ ಕಾಡಲು ಸಾಧ್ಯವಿಲ್ಲ. ಆದ್ದರಿಂದ ನೋವಿನಿಂದ ದಯವಿಟ್ಟು ಖಿನ್ನರಾಗದಿರಿ. 
                         -ಡಾ.ಶ್ರೇ.

No comments:

Post a Comment